1 ಕೊರಿಂಥದವರಿಗೆ 15 : 1 (KNV)
ಇದಲ್ಲದೆ ಸಹೋದರರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನು ತಿಳಿಯಪಡಿ ಸುತ್ತೇನೆ; ನೀವು ಅದನ್ನು ಅಂಗೀಕರಿಸಿದಿರಿ ಮತ್ತು ಅದರಲ್ಲಿ ನಿಂತಿದ್ದೀರಿ.
1 ಕೊರಿಂಥದವರಿಗೆ 15 : 2 (KNV)
ನಾನು ನಿಮಗೆ ಸಾರಿರುವದನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡವರಾಗಿದ್ದು ನಿಮ್ಮ ನಂಬಿಕೆಯು ವ್ಯರ್ಥವಾಗಿರದಿದ್ದರೆ ಅದರಿಂದಲೂ ನೀವು ರಕ್ಷಣೆ ಹೊಂದಿದ್ದೀರಿ.
1 ಕೊರಿಂಥದವರಿಗೆ 15 : 3 (KNV)
ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.
1 ಕೊರಿಂಥದವರಿಗೆ 15 : 4 (KNV)
ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.
1 ಕೊರಿಂಥದವರಿಗೆ 15 : 5 (KNV)
ತರುವಾಯ ಆತನು ಕೇಫನಿಗೂ ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿ ಕೊಂಡನು.
1 ಕೊರಿಂಥದವರಿಗೆ 15 : 6 (KNV)
ಇದಾದ ಮೇಲೆ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಆತನು ಕಾಣಿಸಿ ಕೊಂಡನು; ಇದರಲ್ಲಿ ಹೆಚ್ಚು ಜನರು ಇಂದಿನವರೆಗೂ ಇದ್ದಾರೆ; ಆದರೆ ಕೆಲವರು ನಿದ್ರೆಹೋಗಿದ್ದಾರೆ.
1 ಕೊರಿಂಥದವರಿಗೆ 15 : 7 (KNV)
ತರುವಾಯ ಆತನು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 8 (KNV)
ಕಟ್ಟಕಡೆಗೆ ದಿನ ತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿ ಕೊಂಡನು.
1 ಕೊರಿಂಥದವರಿಗೆ 15 : 9 (KNV)
ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ. ಯಾಕಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿ ದ್ದರಿಂದ ಆಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ.
1 ಕೊರಿಂಥದವರಿಗೆ 15 : 10 (KNV)
ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
1 ಕೊರಿಂಥದವರಿಗೆ 15 : 11 (KNV)
ಹಾಗಾದರೆ ನಾನಾದರೇನು, ಅವರಾದ ರೇನು, ಹಾಗೆಯೇ ನಾವು ಸಾರಿದೆವು. ಹಾಗೆಯೇ ನೀವು ನಂಬಿದಿರಿ.
1 ಕೊರಿಂಥದವರಿಗೆ 15 : 12 (KNV)
ಕ್ರಿಸ್ತನು ಸತ್ತವರೊಳಗಿಂದ ಎದ್ದನೆಂದು ಸಾರೋಣ ವಾಗುತ್ತಿರುವಲ್ಲಿ ಸತ್ತವರಿಗೆ ಪುನರುತ್ಥಾನವೇ ಇಲ್ಲ ವೆಂದು ನಿಮ್ಮೊಳಗೆ ಕೆಲವರು ಹೇಳುವದು ಹೇಗೆ?
1 ಕೊರಿಂಥದವರಿಗೆ 15 : 13 (KNV)
ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ.
1 ಕೊರಿಂಥದವರಿಗೆ 15 : 14 (KNV)
ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವೂ ವ್ಯರ್ಥವಾದದ್ದು, ನಿಮ್ಮ ನಂಬಿಕೆಯೂ ವ್ಯರ್ಥವಾದದ್ದು.
1 ಕೊರಿಂಥದವರಿಗೆ 15 : 15 (KNV)
ಹೌದು, ಸತ್ತವರು ಏಳಲಿಲ್ಲವಾದರೆ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ, ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯ ವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೇವು.
1 ಕೊರಿಂಥದವರಿಗೆ 15 : 16 (KNV)
ಸತ್ತವರು ಏಳಲಿಲ್ಲವಾದರೆ ಕ್ರಿಸ್ತನು ಎಬ್ಬಿಸಲ್ಪಡಲಿಲ್ಲ.
1 ಕೊರಿಂಥದವರಿಗೆ 15 : 17 (KNV)
ಕ್ರಿಸ್ತನು ಎಬ್ಬಿಸಲ್ಪಡಲಿಲ್ಲವಾದರೆ ನಿಮ್ಮ ನಂಬಿಕೆಯು ವ್ಯರ್ಥವಾಗಿದೆ; ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.
1 ಕೊರಿಂಥದವರಿಗೆ 15 : 18 (KNV)
ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆ ಹೋದವರೂ ನಾಶವಾದರು.
1 ಕೊರಿಂಥದವರಿಗೆ 15 : 19 (KNV)
ಈ ಜೀವದಲ್ಲಿ ಮಾತ್ರ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡವ ರಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ನಿರ್ಭಾಗ್ಯರೇ ಸರಿ.
1 ಕೊರಿಂಥದವರಿಗೆ 15 : 20 (KNV)
ಆದರೆ ಈಗ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು ನಿದ್ರೆಹೋದವರಲ್ಲಿ ಪ್ರಥಮಫಲವಾದನು.
1 ಕೊರಿಂಥದವರಿಗೆ 15 : 21 (KNV)
ಮನುಷ್ಯನ ಮೂಲಕ ಮರಣವುಂಟಾದ ಕಾರಣ ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನ ವುಂಟಾಗುವದು.
1 ಕೊರಿಂಥದವರಿಗೆ 15 : 22 (KNV)
ಯಾವ ಪ್ರಕಾರ ಆದಾಮನಲ್ಲಿ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನಲ್ಲಿ ಎಲ್ಲರೂ ಜೀವಿತರಾಗುವರು.
1 ಕೊರಿಂಥದವರಿಗೆ 15 : 23 (KNV)
ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ ಇರುವನು; ಕ್ರಿಸ್ತನು ಪ್ರಥಮ ಫಲ, ತರುವಾಯ ಕ್ರಿಸ್ತನ ಬರೋಣದಲ್ಲಿ ಆತನವರು.
1 ಕೊರಿಂಥದವರಿಗೆ 15 : 24 (KNV)
ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ ಯಾಗುವದು.
1 ಕೊರಿಂಥದವರಿಗೆ 15 : 25 (KNV)
ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
1 ಕೊರಿಂಥದವರಿಗೆ 15 : 26 (KNV)
ನಾಶವಾಗಲಿರುವ ಕಡೇ ಶತ್ರುವು ಮರಣ.
1 ಕೊರಿಂಥದವರಿಗೆ 15 : 27 (KNV)
ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದ್ದಾನೆ. ಸಮಸ್ತವೂ ಆತನಿಗೆ ಅಧೀನ ಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನ ಮಾಡಿದಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿದೆ.
1 ಕೊರಿಂಥದವರಿಗೆ 15 : 28 (KNV)
ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಹ ಸಮಸ್ತವನ್ನೂ ತನಗೆ ಅಧೀನ ಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು.
1 ಕೊರಿಂಥದವರಿಗೆ 15 : 29 (KNV)
ಸತ್ತವರು ಏಳುವದೇ ಇಲ್ಲವಾದರೆ ಸತ್ತವರಿ ಗೋಸ್ಕರ ಬಾಪ್ತಿಸ್ಮ ಮಾಡಿಸಿಕೊಳ್ಳುವವರು ಏನು ಮಾಡುವರು? ಹಾಗಿದ್ದರೆ ಸತ್ತವರಿಗೊಸ್ಕರ ಅವರು ಬಾಪ್ತಿಸ್ಮ ಮಾಡಿಸಿಕೊಳ್ಳುವದು ಯಾಕೆ?
1 ಕೊರಿಂಥದವರಿಗೆ 15 : 30 (KNV)
ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿ ದ್ದೇವೆ?
1 ಕೊರಿಂಥದವರಿಗೆ 15 : 31 (KNV)
ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ನನಗಿರುವ ಸಂತೋಷದ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.
1 ಕೊರಿಂಥದವರಿಗೆ 15 : 32 (KNV)
ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧ ಮಾಡಿದ್ದು ಕೇವಲ ಮನುಷ್ಯರೀತಿಯಾಗಿದ್ದು ಸತ್ತವರು ಎದ್ದು ಬರುವದಿಲ್ಲವಾದರೆ ಅದರಿಂದ ನನಗೇನು ಪ್ರಯೋಜನ? ಹಾಗಾದರೆ ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.
1 ಕೊರಿಂಥದವರಿಗೆ 15 : 33 (KNV)
ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.
1 ಕೊರಿಂಥದವರಿಗೆ 15 : 34 (KNV)
ನೀತಿಗಾಗಿ ಎಚ್ಚರಗೊಳ್ಳಿರಿ, ಪಾಪಮಾಡಬೇಡಿರಿ; ಕೆಲವರಿಗೆ ದೇವರ ವಿಷಯವಾದ ಜ್ಞಾನವೇ ಇಲ್ಲ; ನಾನು ಇದನ್ನು ನಿಮಗೆ ನಾಚಿಕೆ ಪಡಿಸುವದಕ್ಕಾಗಿ ಹೇಳುತ್ತೇನೆ.
1 ಕೊರಿಂಥದವರಿಗೆ 15 : 35 (KNV)
ಆದರೆ ಒಬ್ಬನು--ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು.
1 ಕೊರಿಂಥದವರಿಗೆ 15 : 36 (KNV)
ಮೂಢನು ನೀನು; ನೀನು ಬಿತ್ತಿರುವದು ಸಾಯದ ಹೊರತು ಜೀವಿತವಾಗು ವದಿಲ್ಲ.
1 ಕೊರಿಂಥದವರಿಗೆ 15 : 37 (KNV)
ಒಂದು ವೇಳೆ ಗೋಧಿಯನ್ನಾಗಲಿ ಬೇರೆ ಯಾವದೋ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವದಿಲ್ಲ.
1 ಕೊರಿಂಥದವರಿಗೆ 15 : 38 (KNV)
ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ.
1 ಕೊರಿಂಥದವರಿಗೆ 15 : 39 (KNV)
ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯರ ಶರೀರ ಬೇರೆ, ಪಶುಗಳ ಶರೀರ ಬೇರೆ, ವಿಾನುಗಳದು ಬೇರೆ, ಪಕ್ಷಿಗಳದು ಬೇರೆ.
1 ಕೊರಿಂಥದವರಿಗೆ 15 : 40 (KNV)
ಇದಲ್ಲದೆ ಆಕಾಶದ ದೇಹಗಳು ಮತ್ತು ಭೂಮಂಡಲದ ದೇಹಗಳು ಇವೆ;ಆದರೆ ಆಕಾಶದ ಮಹಿಮೆ ಒಂದು ವಿಧ ಮತ್ತು ಭೂಮಂಡಲದ ಮಹಿಮೆ ಮತ್ತೊಂದು ವಿಧ.
1 ಕೊರಿಂಥದವರಿಗೆ 15 : 41 (KNV)
ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ.
1 ಕೊರಿಂಥದವರಿಗೆ 15 : 42 (KNV)
ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರ ವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡು ತ್ತದೆ. ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
1 ಕೊರಿಂಥದವರಿಗೆ 15 : 43 (KNV)
ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎಬ್ಬಿಸಲ್ಪಡುತ್ತದೆ; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.
1 ಕೊರಿಂಥದವರಿಗೆ 15 : 44 (KNV)
ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎಬ್ಬಿಸಲ್ಪಡುತ್ತದೆ; ಪ್ರಾಕೃತದೇಹವಿರುವದಾದರೆ ಆತ್ಮಿಕ ದೇಹವೂ ಇರುವದು.
1 ಕೊರಿಂಥದವರಿಗೆ 15 : 45 (KNV)
ಬರೆದಿರುವ ಪ್ರಕಾರ-- ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು; ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ.
1 ಕೊರಿಂಥದವರಿಗೆ 15 : 46 (KNV)
ಹೇಗಿದ್ದರೂ ಆತ್ಮಿಕವಾದದ್ದು ಮೊದಲ ನೆಯದಲ್ಲ, ಪ್ರಾಕೃತವಾದದ್ದು ಮೊದಲನೆಯದು; ಆಮೇಲೆ ಆತ್ಮಿಕವಾದದ್ದು.
1 ಕೊರಿಂಥದವರಿಗೆ 15 : 47 (KNV)
ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
1 ಕೊರಿಂಥದವರಿಗೆ 15 : 48 (KNV)
ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
1 ಕೊರಿಂಥದವರಿಗೆ 15 : 49 (KNV)
ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾ ತನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು.
1 ಕೊರಿಂಥದವರಿಗೆ 15 : 50 (KNV)
ಸಹೋದರರೇ, ನಾನು ಹೇಳುವದೇನಂದರೆ-- ಮಾಂಸವು ರಕ್ತವು ದೇವರ ರಾಜ್ಯಕ್ಕೆ ಬಾಧ್ಯವಾಗ ಲಾರವು; ಇಲ್ಲವೆ ಲಯವಾಗುವದು ನಿರ್ಲಯತ್ವಕ್ಕೆ ಬಾಧ್ಯವಾಗುವದಿಲ್ಲ.
1 ಕೊರಿಂಥದವರಿಗೆ 15 : 51 (KNV)
ಇಗೋ, ಮರ್ಮವಾಗಿದ್ದ ಒಂದು ಸಂಗತಿಯನ್ನು ನಿಮಗೆ ತಿಳಿಸುತ್ತೇನೆ-- ನಾವೆಲ್ಲರೂ ನಿದ್ರೆಹೋಗುವದಿಲ್ಲ, ಆದರೆ ನಾವೆ ಲ್ಲರೂ ಮಾರ್ಪಡುವೆವು.
1 ಕೊರಿಂಥದವರಿಗೆ 15 : 52 (KNV)
ಕಡೇ ತುತೂರಿಯು ಧ್ವನಿಯಾಗುವಾಗ ನಾವು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.
1 ಕೊರಿಂಥದವರಿಗೆ 15 : 53 (KNV)
ಲಯ ವಾಗುವಂಥದ್ದು (ಈ ದೇಹವು) ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವಂಥ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ.
1 ಕೊರಿಂಥದವರಿಗೆ 15 : 54 (KNV)
ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ--ಜಯವು ಮರಣವನ್ನು ನುಂಗಿತು ಎಂಬದೇ.
1 ಕೊರಿಂಥದವರಿಗೆ 15 : 55 (KNV)
ಓ ಮರಣವೇ, ನಿನ್ನ ಕೊಂಡಿಯೆಲ್ಲಿ? ಓ ಸಮಾಧಿಯೇ ನಿನ್ನ ಜಯವೆಲ್ಲಿ?
1 ಕೊರಿಂಥದವರಿಗೆ 15 : 56 (KNV)
ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ.
1 ಕೊರಿಂಥದವರಿಗೆ 15 : 57 (KNV)
ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
1 ಕೊರಿಂಥದವರಿಗೆ 15 : 58 (KNV)
ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58

BG:

Opacity:

Color:


Size:


Font: